Work from home assignment-10
ಅಸೈನ್ಮೆಂಟ್ 10ಸರ್ಕಾರಿ ಪ್ರೌಢಶಾಲೆ ತಳುವಗೇರಾತಾಲೂಕು: ಕುಷ್ಟಗಿ, ಜಿಲ್ಲಾ: ಕೊಪ್ಪಳಶಿಕ್ಷಕರ ಹೆಸರು: ಲಕ್ಷ್ಮೀಬಾಯಿ ಎಚ್
ಬೋಧಿಸುವ ವಿಷಯ :ಸಮಾಜ ವಿಜ್ಞಾನ
ಕೋವಿಡ್-19 ವೈರಸ್ ಸೋಂಕು ಹೊರಡುತ್ತಿರುವ. ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ತಮ್ಮ ಸಲಹೆ ಮತ್ತು ಕಾರ್ಯತಂತ್ರಗಳ ಪಟ್ಟಿ
1)ಮಕ್ಕಳೇ ಅವಶ್ಯಕತೆ ಇದ್ದಾಗ ಹೊರಗಡೆ ಹೋಗುವಾಗ ಮಾಸ್ಕನ್ನು ಸರಿಯಾಗಿ ಹಾಕಿ ಕೊಳ್ಳಬೇಕು
2)ಮೇಲಿಂದ ಮೇಲೆ ಕಣ್ಣು ಮೂಗುನ್ನು ಮುಟ್ಟಿ ಕೊಳ್ಳಬಾರದು.
3) ಸಮಯವನ್ನು ಹಾಳು ಮಾಡದೆ ನೀಡಿದ ಮನೆಗೆಲಸವನ್ನು ಪ್ರತಿನಿತ್ಯ ತಪ್ಪದೆ ಮಾಡಬೇಕು. 4)ಹೊರಗಿನಿಂದ ಬಂದ ತಕ್ಷಣ ಕೈ ಮತ್ತು ಮುಖವನ್ನು ಸರಿಯಾಗಿ ಸೋಪಿನಿಂದ 20 ಸೆಕೆಂಡುಗಳ ಕಾಲ ತೊಳೆದುಕೊಳ್ಳಬೇಕು
5) ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದಿ ಅದರಲ್ಲಿರುವ ವಿಶೇಷ ಅಂಶಗಳನ್ನುಬರೆದಿಟ್ಟುಕೊಳ್ಳಬೇಕು. 6)ದಿನಾಂಕದ ಸಮೇತ ದಿನಪತ್ರಿಕೆಗಳಲ್ಲಿ ಬರುವ ಇತಿಹಾಸದ ಕುರಿತು ಚಿತ್ರಗಳನ್ನು ಸಂಗ್ರಹಿಸಿ 7)ಪತ್ರಗಳನ್ನು ತಯಾರಿಸಿ ಸಮಾಜಿಕ ಅಂತರವನ್ನು ಕಾಯ್ದುಕೊಂಡು ಇಬ್ಬರು ಅಥವಾ ಮೂರು ವಿದ್ಯಾರ್ಥಿಗಳು ಕೂಡಿಕೊಂಡು ಒಂದು ಅಂಕದ ಪ್ರಶ್ನೆಗಳನ್ನು ಚರ್ಚಿಸಿ
8)ಪ್ರತಿನಿತ್ಯ ಒಂದು ಭಾರತ ನಕ್ಷೆ ಬಿಡಿಸಿ ಅದರಲ್ಲಿ ರಾಜ್ಯಗಳು ಮತ್ತು ರಾಜಧಾನಿ ಗಳನ್ನು ಗುರುತಿಸಿ
9) ನೀವು ಭೇಟಿ ನೀಡಿದ ಪ್ರೇಕ್ಷಣೀಯ ಸ್ಥಳದ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.
10) ಸಹಜ ನೆಗಡಿ ಕೆಮ್ಮು ಬಂದರೆ ಶುಂಠಿ ಕಷಾಯ ಬಿಸಿನೀರು ಮನೆಮದ್ದನ್ನು ಉಪಯೋಗಿಸಿ ವಿಶ್ರಾಂತಿ ತೆಗೆದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು
11)ಪ್ರತಿನಿತ್ಯ ಮನೆಗೆಲಸದಲ್ಲಿ ನಿಮ್ಮ ತಂದೆ ತಾಯಿ ಮತ್ತು ಗುರುಹಿರಿಯರಿಗೆ ಸಹಾಯ ಮಾಡಿ 12)ಸಮಾಜಿಕ ಅಂತರ ಕಾಯ್ದುಕೊಂಡು ಸ್ವಲ್ಪ ಆಟವಾಡಿ
14) ಕೆಲಸದ ನಿಮಿತ್ಯ ಹೊರಗಡೆ ಹೋದಾಗ ಒಂದು ಮೀಟರ್ ಅಂತರ ಕಾಯ್ದುಕೊಂಡು ನಿಮ್ಮ ಕೆಲಸವನ್ನು ಮುಗಿಸಿಕೊಂಡು ಬರಬೇಕು
15) ಮಕ್ಕಳೇ ಪ್ರತಿನಿತ್ಯ ಮನೆಗೆಲಸ ಮಾಡಿ ಮತ್ತು ಪ್ರತಿನಿತ್ಯ ಪುಸ್ತಕವೊಂದನ್ನು ಓದಿ ಬರೆದು ತೆಗೆಯಬೇಕು
Comments
Post a Comment